ನಿರತನಿರಂತ ಮಕ್ಕಳ ನಾಟಕ ಶಾಲೆ

My photo
puttur, karnataka, India
ಶಿಕ್ಷಣದಲ್ಲಿ ರಂಗಭೂಮಿ ಅಥವಾ ರಂಗ ಮುಖೇನ ಶಿಕ್ಷಣ ಎಂಬುದು ಒಂದು ವಿಶಿಷ್ಟ ಕಲಿಕಾ ವಿಧಾನ. ಇದು ನಾಡಿನ ನಡೆನುಡಿ ಸಂಸ್ಕೃತಿಯನ್ನು ನೇರವಾಗಿ ಪ್ರತಿಪಾದಿಸುವ ಹಾಗೂ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಅತ್ಯಂತ ಯಶಸ್ವಿ ಮಾಧ್ಯಮ. ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಪ್ರಧಾನ ವ್ಯಾಪಾರ ಕೇಂದ್ರ ಹಾಗೂ ಮುಖ್ಯ ಸಾಂಸ್ಕೃತಿಕ ಕೇಂದ್ರ. ನಾಡಿನ ಸಾಂಸ್ಕೃತಿಕ ಭೂಪಟದಲ್ಲಿ ಪುತ್ತೂರಿನ ಹೆಸರು ದಾಖಲಾಗಲು ಕಾರಣರಾದವರು ಮುಖ್ಯವಾಗಿ ಡಾ.ಶಿವರಾಮ ಕಾರಂತರು ಮತ್ತು ಬಿ.ವಿ.ಕಾರಂತರು. ಇವರಿಬ್ಬರೂ ತಮ್ಮ ರಂಗಭೂಮಿಯ ಪ್ರಯೋಗಗಳ ಮೊದಲ ವರ್ಷಗಳನ್ನು ಪುತ್ತೂರಿನಲ್ಲಿಯೇ ಆರಂಭಿಸಿ ಬಳಿಕ ಸಾಂಸ್ಕೃತಿಕ ಲೋಕದಲ್ಲಿ ಪ್ರಖ್ಯಾತರಾದವರು. ಮಕ್ಕಳ ರಂಗಭೂಮಿಗೆ ಈ ಇಬ್ಬರು ಕಾರಂತರ ಕೊಡುಗೆಯೂ ಅನನ್ಯ ಮತ್ತು ಅಪಾರವಾದುದು. 65 ವರ್ಷಗಳಿಗೂ ಹಿಂದೆ ಅವರು ಆರಂಭಿಸಿದ ಮಕ್ಕಳ ರಂಗ ಚಳುವಳಿಯ ಮುಂದುವರಿಕೆಯ ಪ್ರಯತ್ನವಾಗಿ ನಿರತನಿರಂತ ಕಳೆದ ೨೦ ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತಲಿದೆ. ನಿರತನಿರಂತ ಜೊತೆಯಲ್ಲಿ ಕಲಾವಿದರು, ಪತ್ರಕರ್ತರು, ನಾಟಕಕಾರರು, ಅಧ್ಯಾಪಕರು, ವಿದ್ಯಾರ್ಥಿಗಳು ಮುಂತಾಗಿ ಕ್ರಿಯಾಶೀಲವಾಗಿ ಕೆಲಸಮಾಡುತ್ತಿರುವ ಸಣ್ಣ ಗುಂಪೊಂದಿದೆ. ನಿರತನಿರಂತ ನಡೆಸುತ್ತಿರುವ ಚಟುವಟಿಕೆಗಳಿಗೆ ಬೆಂಬಲವಾಗಿ ನಾಡಿನ ಹಲವಾರು ಸಾಹಿತಿಗಳು,ಸಂಘಸಂಸ್ಥೆಗಳು,ಊರವರು,ಶಾಲಾ ಕಾಲೇಜುಗಳ ಅಧ್ಯಾಪಕರು,ವಿದ್ಯಾರ್ಥಿಗಳು ಮುಂತಾಗಿ ದೊಡ್ಡ ಸಮೂಹವಿದೆ.

Saturday, August 22, 2009

ಅದೃಷ್ಟದ ಪಯಣ
ರಚನೆ ;ರತ್ನಾಕರ ಮತ್ಕರಿ [ ಮರಾಠಿ ನಾಟಕ ]
ಕನ್ನಡಕ್ಕೆ; ಐಕೆ ಬೊಳುವಾರು
ಕನಸುಗಳ ಜೊತೆಯಲ್ಲಿಯೇ ಬಾಳುವ ಬಡ ಬಾಲಕನೊಬ್ಬನ ಬಾಳಸಂಚಾರದ ವಿಶಿಷ್ಟ ಬಗೆಯ ಕಥಾ ರೂಪಕ .

No comments:

Post a Comment